SSLC Exam Date: SSLC ಫೇಲ್ ಆದ ವಿದ್ಯಾರ್ಥಿಗಳಿಗೆ ಮತ್ತೆ ಎರಡು ಅವಕಾಶ! ಮರು ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ!

SSLC Exam Date: SSLC ಫೇಲ್ ಆದ ವಿದ್ಯಾರ್ಥಿಗಳಿಗೆ ಮತ್ತೆ ಎರಡು ಅವಕಾಶ! ಮರು ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ!

ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೃಪ್ತಿಕರ ಅಂಕಗಳನ್ನು ಪಡೆದ ಅಥವಾ ಅಸಫಲರಾದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಇನ್ನೆರಡು ಅವಕಾಶಗಳನ್ನು ನೀಡಲು ನಿರ್ಧರಿಸಿದೆ. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳಿಗೆ ಒಂದೇ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ.

ಮನೆ ಇಲ್ಲದಿರುವಂತಹ ಬಡವರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಸಹಾಯಧನ! ಸರ್ವರಿಗೂ ಸೂರು ಯೋಜನೆ 2025!

ಪ್ರಸ್ತುತ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಶೇಕಡಾ 66.14ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ 33.86ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಮತ್ತೆರಡು ಮರು ಪರೀಕ್ಷೆಗಳನ್ನು ಬರೆಯುವ ಅವಕಾಶವನ್ನು ಸರ್ಕಾರ ಒದಗಿಸಿದೆ.

ಫೇಲ್ ಆಗಿರುವ ವಿದ್ಯಾರ್ಥಿಗಳಿಗೆ ಮತ್ತೆ ಅವಕಾಶ!

ಶಿಕ್ಷಣ ಸಚಿವರು ನೀಡಿರುವ ಮಾಹಿತಿ ಪ್ರಕಾರ, ಹೆಚ್ಚಿನ ಅಂಕ ಗಳಿಸಬೇಕೆಂಬ ಉದ್ದೇಶದಿಂದ ಪರೀಕ್ಷೆ-2 ಹಾಗೂ ಪರೀಕ್ಷೆ-3 ಎಂಬ ಎರಡು ಮರು ಪರೀಕ್ಷೆಗಳ ಅವಕಾಶವಿದೆ. ಈ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಬರೆದು ಮುಗಿಸುವ ತನಕ ಅವರ ಡಿಜಿಟಲ್ ಅಂಕಪಟ್ಟಿಯಲ್ಲಿ ‘ಅನುತ್ತೀರ್ಣ’ ಎಂಬ ಶಬ್ದ ಬಳಸಲಾಗದೆ, ಬದಲಿಗೆ ‘ಪ್ರಗತಿಯಲ್ಲಿದೆ’ ಎಂದು ಉಲ್ಲೇಖಿಸಲಾಗುತ್ತದೆ.

ಪರೀಕ್ಷೆ ನಡೆಯುವ ದಿನಾಂಕ!

ಈ ಎರಡನೇ ಮತ್ತು ಮೂರನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ನಡೆಸಲಿದೆ. ಎರಡನೇ ಪರೀಕ್ಷೆ ಮೇ 26ರಿಂದ ಜೂನ್ 2ರವರೆಗೆ ನಡೆಯಲಿದ್ದು, ಮೂರನೇ ಪರೀಕ್ಷೆ ಜೂನ್ 23ರಿಂದ 30ರವರೆಗೆ ನಡೆಯಲಿದೆ.

ವೇಳಾಪಟ್ಟಿ!

ಎಸ್ಸೆಸ್ಸೆಲ್ಸಿ ಪರೀಕ್ಷೆ-2ರ ದಿನಾಂಕ ಹಾಗೂ ವಿಷಯವಾರು ವೇಳಾಪಟ್ಟಿಗೆ ಅನುಸಾರವಾಗಿ, ಪ್ರಥಮ ಭಾಷೆಯ ಪರೀಕ್ಷೆ ಮೇ 26ರಂದು ನಡೆಯಲಿದ್ದು, ಗಣಿತ ಮತ್ತು ಸಮಾಜ ಶಾಸ್ತ್ರವು 27ರಂದು, ದ್ವಿತೀಯ ಭಾಷೆ 28ರಂದು, ಸಮಾಜ ವಿಜ್ಞಾನ 29ರಂದು ನಡೆಯಲಿದೆ. ಮೇ 30ರಂದು ತೃತೀಯ ಭಾಷೆ ಹಾಗೂ ವ್ಯವಹಾರಿಕ ಕೌಶಲ್ಯ ವಿಷಯಗಳು ಇರಲಿದ್ದು, 31ರಂದು ರಾಜ್ಯ ಶಾಸ್ತ್ರ ಮತ್ತು ಸಂಗೀತ ಹಾಗೂ ಜೂನ್ 2ರಂದು ಜೆಟಿಎಸ್ ವಿಷಯಗಳ ಪರೀಕ್ಷೆ ನಡೆಯಲಿದೆ.

ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ!

ಪರೀಕ್ಷೆ-2ಗೆ ನೋಂದಾಯಿಸಿಕೊಳ್ಳಲು ವಿದ್ಯಾರ್ಥಿಗಳು ಮೇ 3ರಿಂದ ಮೇ 10ರೊಳಗೆ ಅರ್ಜಿ ಸಲ್ಲಿಸಬೇಕು. ಈ ಪರೀಕ್ಷೆಯಲ್ಲಿ ತೃಪ್ತಿಕರ ಅಂಕ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆಸಕ್ತರು ತಮ್ಮ ಶಾಲೆಗಳಲ್ಲಿ ಅಥವಾ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ಈ ಹೊಸ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಭವಿಷ್ಯವನ್ನು ಪುನರ್‌ನಿರ್ಮಿಸುವ ಉತ್ತಮ ಅವಕಾಶ ನೀಡುತ್ತದೆ. ಉತ್ತಮ ತಯಾರಿ ಮತ್ತು ಸಮಯ ನಿರ್ವಹಣೆಯೊಂದಿಗೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಸಾಧಿಸಬಹುದು.

Leave a Comment